Friday, August 19, 2011


ಪಯಣ 

ಮನಸೆಂಬ ಅಂಗಳದಲಿ
ಭಾವನೆಗಳ ಸಂಗಮದಲಿ,
ಕನಸುಗಳ ಕಂಗಳಲಿ
ಆಸೆಗಳೆಂಬ ಬೆಂಗಾಡಿನಲಿ,
ಬರೆದೆ ಬದುಕಿಗೆ ಶ್ರೀಕಾರ, ನುಡಿದೆ ಮನದಲ್ಲಿ ಓಂಕಾರ

ಆಳವೇ ಗೊತ್ತಿರದ ಸಾಗರದಲಿ ಧುಮುಕಿದೆ
ಶುರುವಾಯ್ತು ಜೀವನದ ಏರಿಳಿತಗಳ ಆಟ, ವಿಧಿಯ ಚೆಲ್ಲಾಟ
ಜಲಚರಗಳ ಸಂಗ, ತಿಮಿಂಗಲಗಳ ಭಂಗ
ನೇಸರನ ಬೆಳಕಿನಲಿ, ಚಂದಿರನ ನೆರಳಿನಲಿ
ದಿನ ಕಳೆದೆ, ಈಜಿನ ಸುಖ ಅನುಭವಿಸಿದೆ

ದಡ ಸೇರುವ ಆತುರದಲಿ, ಚಲಿಸಿದೆ ಸಮುದ್ರದ ವಿರುಧ್ಧದಲಿ
ಮೌಲ್ಯಗಳನು ಮರೆತು, ಮೌಧ್ಯದಲಿ ಬೆರೆತು
ಲೋಭ ಮಾತ್ಸರ್ಯಗಳ ಮೋಹಕ್ಕೆ ಸಿಲುಕಿ
ಮದವೆಂಬ ಬಿಸಿಲ್ಗುದುರೆಯನ್ನೇರಿ ಈಜಿದೆ
ಸಾಗರಕ್ಕೆ ಸವಾಲೆಸೆಯುವ ಭ್ರಮೆಯಲ್ಲಿ, ತನ್ನತನವನ್ನು ಮರೆತೆ

ಜಯಶಾಲಿ ಎಂಬ ನನ್ನ ಘೋಷಣೆಗೆ ಉತ್ತರಿಸಿದಳು ಮಾತೆ
ಮುಂದೊಂದು ದಿನ ಗುರಿಯಾಗಿಸಿದಳು ಚಂಡಮಾರುತಕೆ,
ಈಜಿದೆ, ಈಜಿದೆ ದಡ ಕಾಣದೆ ನಿರಶನಾದೆ
ಈಜಿ, ಈಜಿ ಸೋತೆ ! ಶರಣಾದೆ ! ಪ್ರಕೃತಿ ಮಾತೆಗೆ ತಲೆಬಾಗಿದೆ !


ಹುಟ್ಟಿನಿಂದ ಯಾವ ಮನುಷ್ಯನೂ  ಕೆಟ್ಟವನಿರುವದಿಲ್ಲ, ಭ್ರಷ್ಟನಾಗಿರುವದಿಲ್ಲ  . ಸಂಗ ದೋಷದಿಂದಲೋ ಇಲ್ಲ ಸಂಧರ್ಭಕ್ಕೆ ಸಿಕ್ಕಿ ಕೆಟ್ಟ ವ್ಯಕ್ತಿಯಾಗುತ್ತಾನೆ. ಆದರೆ ಅದನ್ನು ಸರಿಪಡಿಸಿಕೊಳ್ಳದೆ ತಾನು ಮಾಡುತ್ತಿರುವದು ಸರಿ  ಎಂದುಕೊಳ್ಳುತ್ತಾನೆ. ಮನುಷ್ಯ  ಎಷ್ಟೇ ದುಷ್ಟನಿದ್ದರೂ ಕೊನೆಗೊಂದು ದಿನ  ಪ್ರಕೃತಿಗೆ ತಲೆ ಬಾಗಬೇಕು.

Saturday, January 8, 2011

ನನ್ನ ಕನಸಿನ ಹುಡುಗನಿಗೆ

    ನನ್ನ ಕನಸಿನ ಹುಡುಗ ನೀನು,
   ಎಲ್ಲಿದ್ದಿಯೋ ಗೊತ್ತಿಲ್ಲ, ಆದರೆ ಹುಡುಗಾ
   ನೀನು ಹೇಗಿರಬೇಕೆಂದು ಗೊತ್ತು!
   ಹೇಗಿರಬೇಕು ಗೊತ್ತೇ........?

ನೀನು ಮನ್ಮಥನಂತೆ ಸುಂದರನಗಿರದಿದ್ದರೂ ಅಡ್ಡಿಯಿಲ್ಲ,
ಆದರೆ ಮನಸ್ಸು ಮಾತ್ರ ಕುರೂಪಿಯಗಿರಬಾರದು.

ನಿನ್ನ ಹೃದಯ ಸಾಗರದಷ್ಟೇನೂ ವಿಶಾಲವಗಿರಬೆಕಿಲ್ಲ,
ಆದರೆ ತೀರ ನಿಂತ ನೀರಿನಂತೆ ಕಲುಷಿತವಾಗಿರಬಾರದು.

ಅಂತರಂಗ ಆಕಾಶದಷ್ಟು ಅಗಲವಿರದಿದ್ದರೂ,
ಅಂಗೈ ಯಷ್ಟು ಸಂಕುಚಿತವಿರಬಾರದು.

ನಿನಗೆ ಕನಸು ಕಾಣಲು ಬಾರದಿದ್ದರೂ ಪರವಾಗಿಲ್ಲ,
ನನ್ನ ಕನಸುಗಳಿಗೆ ಸ್ಪಂದಿಸಿದರೆ ಸಾಕು.

ನೀನು ಅತಿ ಬುದ್ದಿವಂತನಗಿರದಿದ್ದರೂ ಬೇಸರವಿಲ್ಲ,
ಆದರೆ ನನ್ನ ಹೃದಯ ಅರ್ಥ ಮಾಡಿಕೊಲ್ಲದಿರುವಷ್ಟು ದಡ್ಡ ಮಾತ್ರ ಆಗಿರಬೇಡ.

ಅತೀ ಶ್ರಿಮಂತನಾಗಿರುವುದೇನೂ ಬೇಡ, ಆದರೆ
ಹೃದಯ ಮಾತ್ರ ಸದ್ಗುಣಗಳ ಶ್ರೀಮಂತ ಖಜಾನೆಯಾಗಿರಲಿ.

ನೀನು ಶ್ರಿರಾಮಚಂದಿರನೆ ಆಗಬೇಕೆಂದೇನೂ ಇಲ್ಲ, ಆದರೆ
ನಿನ್ನನ್ನು ಒಲಿದು ಬಂದ ಹೆಣ್ಣಿನ ಆತ್ಮಕ್ಕೆ ಅವಮಾನವಗದಂತೆ ಪ್ರೀತಿ, ಗೌರವ ತೋರಿಸು ಸಾಕು.

ನನ್ನೆದುರು 'ಜಿ ಹುಜೂರ್ ' ಎಂದು ತಲೆತಗ್ಗಿಸುವ ದಾಸನಾಗುವುದು ಬೇಡ,
ಆದರೆ ಗಂಡನೆಂಬ ಅಹಂಕಾರ ತೋರದೆ ಗೆಳೆಯನಂತೆ ಸ್ನೇಹಭಾವದಿಂದ ಕಾಣು.

ನೀನು ಯುದ್ಧ ಭೂಮಿಯಲ್ಲಿ ನಿಂತು ಹೋರಾಡುವಷ್ಟು ಪರಾಕ್ರಮಿಏನೂ ಆಗಿರಬೇಕಿಲ್ಲ,
ಆದರೆ ಆತ್ಮ ಗೌರವಕ್ಕೆ ಧಕ್ಕೆಯಾದಾಗ ಪ್ರತಿಭಟಿಸದೇ ಸುಮ್ಮನಿರುವ ಹೇಡಿಯಾಗಿರಬೇಡ.

ಕರ್ಣನಂತೆ ನೀನು ಉದಾರ ದಾನಿಯಗದಿದ್ದರೂ ಪರವಾಗಿಲ್ಲ,
ಆದರೆ ನೀನು ತೋರುವ ಅಕ್ಕರೆಯಲ್ಲಿ ಜಿಪುನತನವಿಲ್ಲದಿರಲಿ.

ನಿನ್ನ ಪ್ರೀತಿಗಾಗಿ ತಾಜ್ಮಹಲನ್ನೇ ಕಟ್ಟಿಸಬೇಕೆಂದೇನಿಲ್ಲ,
ಆದರೆ ನಿನ್ನ ಒಲವಿನ ಆಸರೆಯ ರಕ್ಷಣಾ ಗೋಡೆ ಗಟ್ಟಿಯಾಗಿದ್ದರೆ ಸಾಕು.

ಹುಡುಗಾ, ನನಗಾಗಿ ನೀನು ನಿನ್ನ ಪ್ರಾಣವನ್ನೇ ಕೊಡುವುದು ಬೇಡ,
ನಿನ್ನ ಪ್ರಾಮಾಣಿಕ ಪ್ರೀತಿ ಸಾಕು!

   I have read  this in prajaavani 2005, dont  remember correctly ,so I  have  added  my own . I  hope  you  people  like  it .Thanks  to the one who published this article .
ಸ್ವಾತಿ ಮುತ್ತಿನ ಮಳೆ ಹನಿಯೇ, ಮೆಲ್ಲ ಮೆಲ್ಲನೆ ಧರೆಗಿಳಿಯೆ


   ಬರದ ನಾಡು ಅಂತನ ಹೆಸರುವಾಸಿಯಾಗಿರುವ ಬಿಜಾಪುರದ ಕೊಲ್ಹಾರದವಳಾದ ನಾನು ಶಿಕ್ಷಣ ನಗರಿ ಧಾರವಾಡಕ್ಕೆ ಪ್ರಾಜೆಕ್ಟ್ ಮಾಡಲು ಹೋಗಿದ್ದೆ. ಧಾರವಾಡದಲ್ಲಿ ತುಂಬಾ ಮಳೆ ಅಂತ ಕೇಳಿದ್ದೆ, ಆದ್ರ ಮಲೆನಾಡ ಅನುಭವ ಇರಲಿಲ್ಲ. ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ಬೀಳುವ ಮಳೆಯ ಸೊಬಗು ನನ್ನನ್ನು ಮಂತ್ರಮುಗ್ಧಳನ್ನಗಿ  ಮಾಡಿಸಿತು.
              ನಮಗೋ ವರ್ಷಕ್ಕೊಮ್ಮೆ ಬರುವ ಮಳೆಗಾಲಕ್ಕೆ ಆತುರದಿಂದ ಕಾಯ್ತಾ ಕುಳಿತಿರತಿದ್ವಿ ನಮ್ಮ ಜನೆರೆಲ್ಲ ಮಳೆಗಾಲದ ಸಿದ್ದತೆಗಳನ್ನ ಮಾದಿಕೊಳ್ಳೋದು, ಅಂತಹದರಲ್ಲಿ ದಿನ ಮಳೆ ಅಂದ್ರೆ??? ಮಳೆಗಾಲದಲ್ಲಿ ಯಾವಾಗಲಾದರೊಮ್ಮೆ ಮಳೆ ಬಂದ್ರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕುಣಿಯೋದು, ನೆನೆಯೋದು, ಮಳೆ ನೀರಿನಲ್ಲಿ ಆಟ ಆಡೋದು, ಐದಾರು ವರ್ಷಗಳಿಗೊಮ್ಮೆ ಆನೆ ಕಲ್ಲು ಮಳೆ ಬಿದ್ದರೆ ಅದನ್ನ ತಿನ್ನಲಿಕ್ಕೆ ಓಡಾಡೋದು, ಸ್ಕೂಲ್ಗೆ ಹೋಗಬೇಕಾದ್ರೆ ಅಮ್ಮ ಸ್ವೆಟರ್, ಛತ್ರಿ ಕೊಟ್ಟು ಕಲಿಸೋದು ಮತ್ತು ಎಚ್ಚರಿಕೆಯ ಮಾತುಗಳನ್ನು ಹೇಳೋದು..
           ಇನ್ನು ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ  ನೀರಿಲ್ಲ ಅಂತ ಕಾಯ್ತಾ ಕುಳಿತ ನಮ್ಮ ರೈತರಿಗೆಲ್ಲ ಕೋಟಿ ಕೋಟಿ ಲಾಟರಿ ಸಿಕ್ಕಿದಂತಹ ಸಂತೋಷ, ಎಸ್ಟೋ ದಿನಗಳ ತಪಸ್ಸು ಫ್ಹಲಿಸಿತೆಂಬ ಭಾವನೆ, ಸಾಕ್ಷಾತ್ ಗಂಗಾ ಮಾತೆಯೇ ಇಳಿದು ಬಂದ ಹಾಗೆ, ರೈತ ಮಾತೃಹೃದಯದಿಂದ ಆ ಭೂಮಿಯನ್ನು ಮುಟ್ಟೋದು, ತನ್ನ ಜಮೀನನ್ನೇ ಪದೇ  ಪದೇ ನೋಡೋದು. ಮುಂದಿನ ಬಿತ್ತನೆಗಳೆಗೆ ಪ್ರಾರಂಭ ಮಾಡೋದು.
              ಆದರೆ ಧಾರವಾಡಕ್ಕೆ ಹೋದ ದಿನವೇ ಮಳೆ ಅನುಭವ ಆಯಿತು. ಮಳೆಯ ಒಂದೊಂದು ಹನಿಗಳು ರೋಮಾಂಚನ ಉಂಟು ಮಾಡ್ತಾ ಇದ್ವು, ಇನ್ನು ಆ ಹಸಿರು ನಾಡಲ್ಲಿ ಎಷ್ಟು ನೋಡಿದರು ಸಾಲದು ಎನ್ನುವಷ್ಟು ಶಾಂತ ನಗರ. ಪ್ರಿಯತಮನ ಅಪ್ಪುಗೆಯಲ್ಲಿ ಮಳೆಯ ಸವಿ ಅನುಭವಿಸುತ್ತ ನಡೆದಾಡುವ ಪ್ರೇಮಿಗಳು, ಹರೆಯ ಹುಡುಗರ ಹುಚ್ಚಾಟದ ಬೈಕ್ ರೈಡಿಂಗ್, ಬಿಸಿ ಬಿಸಿ ಪಕೋಡ, ಟೀ, ಅಬ್ಬಬ್ಬಾ ಎಷ್ಟು ಹೇಳಿದ್ರು ಸಾಲದು.ಮಳೆ ನಿಂತ ನಂತರ ಆ ಪ್ರಕೃತಿಯ ಸೊಬಗನ್ನು ನೋಡಬೇಕು, ಎಲೆಗಳ ಮೇಲಿನ ಮುತ್ತಿನಂತಹ ಹನಿಗಳು, ಸ್ವಚ್ಚವಾದ ರಸ್ತೆಗಳು, ತಂಪಾದ ಗಾಳಿ, ಎಷ್ಟೇ ದೂರ ನಡೆದರೂ ದನಿವಾಗದಂತಹ ಹುಮ್ಮಸ್ಸು.
           ಅಂತಹ ಸೊಬಗಿನ ವಾತಾವರಣದಲ್ಲಿ ಕವಿಹೃದಯ ಹುಟ್ಟುವುದು ಸಹಜ. ಅದಕ್ಕೆ ಅನ್ಸುತ್ತೆ ದ.ರಾ.ಬೇಂದ್ರೆ ಅಂತಹ  ಅದ್ಭುತ ಕವಿಗಳನ್ನು ಕಂಡಿದೆ, ಮನೋಹರ ಮಳಗಂವಕರ್ ಅವರು ತಮ್ಮ ನಿವೃತ್ತಿ ನಂತರ ಜೊಯಿಡದ ಕಾಡಿನಲ್ಲಿರುವ ಬಂಗಲೆಯಲ್ಲಿ ವಾಸವಾಗಿದ್ರು.
      ಇಲ್ಲಿ ಮಳೆ ಬರಲಿಕ್ಕೆ ಟೈಮ್ ಇಲ್ಲ ಟೇಬಲ್ ಇಲ್ಲ ಅಂತಾರಲ್ಲ ಹಾಗೆ, ಯಾವಾಗ್ಲೂ ಮಳೆನೆ , ಯಾವಾಗ್ ಬರುತ್ತೋ ಗೊತ್ತಾಗಲ್ಲ. ಅದ್ಕ ಅನ್ನೋದು ಧಾರವಾಡ ಮಳಿ ನಂಬಬಾರದು ಬೆಳಗಾವ ಹುಡ್ಗಿಯರನ್ನ ನಂಬಬಾರದು ಅಂತ. ನನ್ನ experience ಬಹಳ  excitement ದಿಂದ ಹೇಳ್ತಾ ಇದ್ದೆ , ನಮ್ಮ ಒಬ್ರು ಹಿರಿಯರು ಹೇಳಿದ್ರು ಊಟದಾಗ ಉಪ್ಪಿನಕಾಯಿ ಇದ್ರ ಚಂದ, ನೀ ಹೇಳೋದು ಉಪ್ಪಿನಕಾಯಿನ ಊಟ ಆದಂಗ ಆಯಿತು , ಮಳೆಗಾಲದಾಗ  ಮಳಿ ಬಂದ್ರ ಚಲೋ ಅದ ಬಿಟ್ಟು ಯಾವಾಗಲು ಮಳಿನ ಇದ್ರ ಬಚ್ಚಲ ಮನಿ ಇದ್ದಂಗ ಆಗತೈತಿ ಅಂದ್ರು.ಅದೇನೇ ಇರಲಿ ನನಗಂತೂ ಆ ಪರಿಸರ ತುಂಬಾ ಇಷ್ಟ ಆಯಿತು.

Thursday, October 7, 2010

Yaava Hoovu Yara Mudigo...


ಚಂದದ ಈ ಬಾಳ ಪಯಣದಲ್ಲಿ
ಆಡುತ ಕಲಿಯುತ ನಲಿಯುವ ದಿನಗಳಲ್ಲಿ ,
ಸುಂದರ ಗೂಡಿನ ಈ ಪುಟ್ಟ  ಹಕ್ಕಿಗೆ
ಬಂದಿದೆ ಸಂಗಾತಿಯ ಆಸೆ ಬಾಳ್ವೆಗೆ

ಅಪ್ಪ ಅಮ್ಮನ ಅಕ್ಕರೆಯ ಅಸರೆಯಿಂದ
ಬದುಕುವ ಕಲೆ ಕಲಿತ ಈ ಹಕ್ಕಿಗೆ,
ಯಾವ ಋಣಾನುಭಂದದ ಸೆಳೆತವೋ
ತನ್ನದೇ  ಗೂಡು ಕಟ್ಟುವ ತವಕ ಮೆಲ್ಲಗೆ

ಸ್ವಚ್ಚಂದವಾಗಿ  ಹಾರಾಡುವ ಈ ಹಕ್ಕಿಗೆಕೋ
 ಪಂಜರದ ಕನಸು
ಸಂಸಾರದ ಜಂಜಾಟ ಬೇಡವೆಂದರೂ
ಕೇಳದ ಮನಸು, ಕಾಣುತಿದೆ ಆದರಲ್ಲಿ ಸೊಗಸು

ಪ್ರೀತಿಯೆಂಬ ನಿನ್ನ ತೋಟದಲ್ಲಿ ಸುಮವಾಗುವ  ಹಂಬಲ
 ನಂಬಿಕೆ ,ಹೊಂದಾಣಿಕೆಎಂಬ   ಬಂಡಿಗೆ ಜೊತೆ ಸಾಗುವ ಬಲ ,
ನಿನ್ನ ಕನಸುಗಳಿಗೆ ಕಣ್ಣಾಗಲು ಕೊಡು ನೀ ಬೆಂಬಲ
ನಿನ್ನ ಬಾಳ ರಥಕ್ಕೆ ಸಾರಥಿಯಗುವ ಛಲ

ಯಾವ ದೇಶದ ಒಡೆಯನೋ ನೀನು
ನಿನ್ನ ಪಂಜರಕೊಂದು ಗಿಳಿ ಬೇಡವೇ ?
ನಿನ್ನ  ಬರುವೆಕೆಯನ್ನೇ  ಕಾಯುತಿರುವೆ
ಸತಾಯಿಸಬೇಡ, ಬಂದುಬಿಡು ಸುಮ್ಮನೆ !